ಅಭಿಪ್ರಾಯ / ಸಲಹೆಗಳು

ಇತಿಹಾಸ

ಸಚಿವಾಲಯ ಗ್ರಂಥಾಲಯದ ಪರಿಚಯ (ಸ್ಥಾಪನೆ: 1918)

ಇತಿಹಾಸ :

     ಸಚಿವಾಲಯ ಗ್ರಂಥಾಲಯವು ೧೯೧೮ ರಲ್ಲಿ  ಆಡಳಿತಾತ್ಮಕ ಉದ್ದೇಶಕ್ಕಾಗಿ ಸ್ಥಾಪನೆಗೊಂಡಿರುವ ಬಗ್ಗೆ ಕುರುಹುಗಳಿವೆ.   ಸ್ವಾತಂತ್ರ ಪೂರ್ವದಲ್ಲಿ ಈ ಗ್ರಂಥಾಲಯವು ಪದಾಧಿಕಾರಿಗಳು ಹಾಗೂ ವಿಧಾನ ಪರಿಷತ್ತಿನ ಸದಸ್ಯರಿಗಾಗಿ ಪರಾಮರ್ಶೆ ಮಾಡುವ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿತ್ತು. 

 

      ಸ್ವಾತಂತ್ಯ್ರದ ನಂತರ ಗ್ರಂಥಾಲಯದಲ್ಲಿ ಲಭ್ಯವಿದ್ದ  ಸರ್ಕಾರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಸೇರಿಸಿ ಮೈಸೂರು ಸರ್ಕಾರಿ ಸಚಿವಾಲಯ ಗ್ರಂಥಾಲಯವನ್ನು  ಸ್ಥಾಪಿಸಲಾಯಿತು.  ಕಾಲಾನಂತರ, ಇದೇ ಗ್ರಂಥಾಲಯವು ವಿಸ್ತಾರಗೊಂಡು ಕರ್ನಾಟಕ ಸರ್ಕಾರದ ಸಚಿವಾಲಯ ಗ್ರಂಥಾಲಯವಾಗಿ, ಪರಾಮರ್ಶೆ ಹಾಗೂ ಗ್ರಂಥ ಎರವಲು  ನೀಡುವ ಕಾರ್ಯ ನಿರ್ವಹಿಸತೊಡಗಿತು.

 

    ಈ ಗ್ರಂಥಾಲಯವು 1918 ರಲ್ಲಿ ಸ್ಥಾಪನೆಗೊಂಡಿದ್ದು, ನಂತರ ಈಗಿನ ಉಚ್ಚ ನ್ಯಾಯಾಲಯದ ಕಟ್ಟಡಕ್ಕೆ (ಅಠಾರ ಕಚೇರಿ) ಸ್ಥಳಾಂತರಗೊಂಡಿತು.  ವಿಧಾನಸೌಧ ಕಟ್ಟಡದ ನಿರ್ಮಾಣವು ಪೂರ್ಣಗೊಳ್ಳುವ ತನಕ ಈ ಗ್ರಂಥಾಲಯವು ಉಚ್ಚ ನ್ಯಾಯಾಲಯದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು.  ಅರ್ಥಶಾಸ್ತ್ರ, ಕಾನೂನು, ಚರಿತ್ರೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳು ಈ ಗ್ರಂಥಾಲಯಕ್ಕೆ ಸೇರ್ಪಡೆಗೊಂಡವು.  ಕಾಲಕ್ರಮೇಣ ಮೈಸೂರು ಸಂಸ್ಥಾನದ ಮಹಾರಾಜರ ಗ್ರಂಥಾಲಯವು ಸಚಿವಾಲಯ ಗ್ರಂಥಾಲಯವಾಗಿ ಮಾರ್ಪಾಡಾಯಿತು.  ವಿಧಾನಸೌಧದಲ್ಲಿ ಗ್ರಂಥಾಲಯಕ್ಕಾಗಿ ಕೊಠಡಿ ಸಂಖ್ಯೆ: 28 ನ್ನು ನಿಗದಿಮಾಡಲಾಯಿತು, ನಂತರ ಗ್ರಂಥಾಲಯವನ್ನು ವಿಧಾನಸೌಧದ ಕೊಠಡಿ ಸಂಖ್ಯೆ 11ಕ್ಕೆ ಸ್ಥಳಾಂತರಿಸಲಾಯಿತು. 

 

     ಮೊದಲಿಗೆ ಇದನ್ನು ಕಂದಾಯ ಸಚಿವಾಲಯ ಗ್ರಂಥಾಲಯವೆಂದು ಕರೆಯಲಾಗುತ್ತಿದ್ದು, ಆ ನಂತರ ಸಾಮಾನ್ಯ ಸಚಿವಾಲಯ ಗ್ರಂಥಾಲಯ, ಮೈಸೂರು ಸರ್ಕಾರದ ಸಚಿವಾಲಯ ಗ್ರಂಥಾಲಯವೆಂದು ಕರೆಯಲಾಯಿತು.   ಪ್ರಸ್ತುತ ಇದನ್ನು  "ಕರ್ನಾಟಕ ಸರ್ಕಾರದ ಸಚಿವಾಲಯ ಗ್ರಂಥಾಲಯ" ಎಂದು ಕರೆಯಲಾಗುತ್ತಿದೆ. 

ಇತ್ತೀಚಿನ ನವೀಕರಣ​ : 24-11-2020 02:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಚಿವಾಲಯ ಗ್ರಂಥಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080