ಅಭಿಪ್ರಾಯ / ಸಲಹೆಗಳು

ಗ್ರಂಥಾಲಯದ ಸದಸ್ಯತ್ವ

ಸಚಿವಾಲಯ ಗ್ರಂಥಾಲಯದಲ್ಲಿ ಸದಸ್ಯತ್ವ ಹೊಂದಲು ಇರುವ ಮಾನದಂಡಗಳು /ನಿಬಂಧನೆಗಳು

       

ಎ)  ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಖಾಯಂ ಅಧಿಕಾರಿಗಳು ಹಾಗೂ ನೌಕರರು ಗ್ರಂಥಾಲಯದಿಂದ ನಿಗದಿಪಡಿಸಲಾದ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಪೂರ್ಣ  ಮಾಹಿತಿಗಳನ್ನು ಒದಗಿಸಿದಲ್ಲಿ, ಗ್ರಂಥಾಲಯದ ಸದಸ್ಯತ್ವವನ್ನು ಉಚಿತವಾಗಿ ಪಡೆಯಲು ಅರ್ಹರಾಗಿರುತ್ತಾರೆ.  ಇವರಿಗೆ ನಾಲ್ಕು ಪುಸ್ತಕಗಳ ಎರವಲು ಚೀಟಿ ಹಾಗೂ ಒಂದು ನಿಯತಕಾಲಿಕೆ ಎರವಲು ಚೀಟಿ (4+1) ಗಳನ್ನು ನೀಡಲಾಗುವುದು.  ಸಚಿವಾಲಯದಲ್ಲಿ ಒಪ್ಪಂದದ/ಗುತ್ತಿಗೆ ಆಧಾರದ ಮೇಲೆ / ಅನ್ಯ ಕಾರ್ಯ ನಿಮಿತ್ತ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ನೌಕರರಿಗೆ ಸಚಿವಾಲಯ ಗ್ರಂಥಾಲಯದ ಸದಸ್ಯತ್ವವನ್ನು ನೀಡಲು ನಿಯಮಗಳಲ್ಲಿ ಅಸ್ಪದವಿರುವುದಿಲ್ಲ.

 

ಬಿ) ಗ್ರಂಥಾಲಯ ಸಮಿತಿಯು ಒಪ್ಪಿದಲ್ಲಿ, ಈ ಕೆಳಗೆ ನಮೂದಿಸಿದ ವ್ಯಕ್ತಿಗಳು ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಭರ್ತಿಮಾಡಿ ಗ್ರಂಥಾಲಯಕ್ಕೆ ಠೇವಣಿ ಮೊತ್ತವಾದ ರೂ.400/- (ನಾಲ್ಕು ನೂರು ರೂಪಾಯಿಗಳು ಮಾತ್ರ) (ಹಿಂದಿರುಗಿಸಬಹುದಾದ) ಹಾಗೂ ಶುಲ್ಕ ರೂ.20/- (ಇಪ್ಪತ್ತು ರೂಪಾಯಿಗಳು ಮಾತ್ರ) (ಹಿಂದಿರುಗಿಸಲಾಗದ) ಗಳನ್ನು ಪಾವತಿಸಿ ಗ್ರಂಥಾಲಯದ ಸದಸ್ಯತ್ವವನ್ನು ಪಡೆಯಬಹುದಾಗಿದೆ.  ಇವರಿಗೆ ಎರಡು ಪುಸ್ತಕಗಳ ಎರವಲು ಚೀಟಿ ಹಾಗೂ ಒಂದು ನಿಯತಕಾಲಿಕೆ ಎರವಲು ಚೀಟಿ (2+1) ಗಳನ್ನು ನೀಡಲಾಗುವುದು.

 

 *  ಸಚಿವಾಲಯದಲ್ಲಿ ಸೇವೆಯಲ್ಲಿದ್ದಾಗ ಗ್ರಂಥಾಲಯದ ಸದಸ್ಯತ್ವವನ್ನು ಪಡೆದುಕೊಂಡಿದ್ದ, ನಿವೃತ್ತ ಐಎಎಸ್‌, ಐಪಿಎಸ್‌, ಐಎಫ್‌ಎಸ್‌, ಕೆ.ಎ.ಎಸ್.‌, ಕರ್ನಾಟಕ ನ್ಯಾಯಾಂಗ ಸೇವೆ ಮತ್ತು ಕರ್ನಾಟಕ ಸರ್ಕಾರ ಸಚಿವಾಲಯದ ಎ, ಬಿ ಮತ್ತು

     ಸಿ ವರ್ಗಕ್ಕೆ ಸೇರಿದ ಅಧಿಕಾರಿಗಳು;

 *  ಕಲೆ, ಸಾಂಸ್ಕೃತಿಕ ಹಾಗೂ ಪತ್ರಿಕೋದ್ಯಮ ಈ ಕ್ಷೇತ್ರಗಳಿಗೆ ಸಂಬಂಧಿಸಿದ ಗಣ್ಯವ್ಯಕ್ತಿಗಳು.

ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಸರ್ಕಾರದ ಇತರ ಇಲಾಖೆಗಳ ಅಧಿಕಾರಿಗಳು ಮತ್ತು ನೌಕರರು ಹಾಗೂ ಸಚಿವಾಲಯದಲ್ಲಿ ನಿಯೋಜನೆಯ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ನೌಕರರೂ ಸಹ ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ಅಗತ್ಯ ಮಾಹಿತಿಗಳೊಡನೆ ಭರ್ತಿಮಾಡಿ, ಠೇವಣಿ ಮೊತ್ತವಾಗಿ ರೂ.1000/- (ಒಂದು ಸಾವಿರ ರೂಪಾಯಿ ಮಾತ್ರ) (ಹಿಂದಿರುಗಿಸಬಹುದಾದ) ಹಾಗೂ ಸದಸ್ಯತ್ವ ಶುಲ್ಕ ರೂ.20/- (ಇಪ್ಪತ್ತು ರೂಪಾಯಿಗಳು ಮಾತ್ರ) (ಹಿಂದಿರುಗಿಸಲಾಗದ) ಪಾವತಿಸಿ,  ನಿಬಂಧನೆಗೊಳಪಟ್ಟು ಸಚಿವಾಲಯ ಗ್ರಂಥಾಲಯದ ಸದಸ್ಯತ್ವವನ್ನು ನಿಗದಿಪಡಿಸಿದ ಅವಧಿಗೆ ಪಡೆಯಬಹುದಾಗಿದೆ.   ಇವರಿಗೆ ಎರಡು ಪುಸ್ತಕಗಳ ಎರವಲು ಚೀಟಿ ಹಾಗೂ ಒಂದು ನಿಯತಕಾಲಿಕೆ ಎರವಲು ಚೀಟಿಯನ್ನು  (2+1) ನೀಡಲಾಗುವುದು.  (ಸದಸ್ಯತ್ವ ನೀಡಿಕೆಯಲ್ಲಿ ಮುಖ್ಯ ಗ್ರಂಥಾಧಿಕಾರಿಗಳ ತೀರ್ಮಾನ ಅಂತಿಮವಾಗಿರುತ್ತದೆ).

ಗ್ರಂಥವನ್ನು ಎರವಲು ಪಡೆಯುವಿಕೆ ಮತ್ತು ಹಿಂದಿರುಗಿಸುವಿಕೆ - ನಿಬಂಧನೆಗಳು :

 • ಪ್ರತಿಯೊಬ್ಬ ಸದಸ್ಯನಿಗೂ ಪುಸ್ತಕಗಳನ್ನು ಹಾಗೂ ನಿಯತಕಾಲಿಕೆಗಳನ್ನು ಎರವಲು ಪಡೆದುಕೊಳ್ಳಲು  ನಿಯಮ 6 ರಲ್ಲಿ ನಮೂದಿಸಿದಂತೆ ಎರವಲು ಚೀಟಿಗಳನ್ನು ನೀಡಲಾಗುವುದು.
 • ಸದಸ್ಯರು ತಮ್ಮ ಎರವಲು ಚೀಟಿಗಳಿಗೆ ಪ್ರತಿಯಾಗಿಯೇ ಪುಸ್ತಕ/ ನಿಯತಕಾಲಿಕೆಯನ್ನು ಎರವಲು ಪಡೆಯತಕ್ಕದ್ದು ಹಾಗೂ ಪುಸ್ತಕ/ ನಿಯತಕಾಲಿಕೆಯನ್ನು ಗ್ರಂಥಾಲಯಕ್ಕೆ ಹಿಂದಿರುಗಿಸಿದ ನಂತರ ಅವರ ಎರವಲು ಚೀಟಿಗಳನ್ನು ಹಿಂದಿರುಗಿಸಲಾಗುವುದು.
 • ಎರವಲು ಪಡೆದ ಪುಸ್ತಕ/ ನಿಯತಕಾಲಿಕೆಯನ್ನು ಆಯಾ ಪುಸ್ತಕ/ ನಿಯತಕಾಲಿಕೆಯ ಮೇಲೆ ನಮೂದಿಸಲ್ಪಡುವ ನಿಗದಿತ ಗಡುವು ದಿನಾಂಕದೊಳಗಾಗಿ ಅಥವಾ 15 ದಿನಗಳ ಒಳಗಾಗಿ ಗ್ರಂಥಾಲಯಕ್ಕೆ ಹಿಂದಿರುಗಿಸತಕ್ಕದ್ದು.
 • ಎರವಲು ಪಡೆದ ಪುಸ್ತಕಕ್ಕೆ ಬೇರೆ ಸದಸ್ಯರು ಬೇಡಿಕೆ ಸಲ್ಲಿಸದೇ ಇದ್ದಲ್ಲಿ ಅಂತಹ ಪುಸ್ತಕವನ್ನು ಮುಖ್ಯ ಗ್ರಂಥಾಧಿಕಾರಿಯವರ / ಉಪ ಗ್ರಂಥಾಧಿಕಾರಿಯವರ ವಿವೇಚನೆಗೊಳಪಟ್ಟು ಮತ್ತೆ 15 ದಿನಗಳಿಗೆ ನವೀಕರಿಸಿಕೊಳ್ಳಬಹುದಾಗಿದೆ.
 • ಪುಸ್ತಕಗಳನ್ನು ಸದಸ್ಯರ ವೈಯಕ್ತಿಕ ಉಪಯೋಗಕ್ಕಾಗಿ ನೀಡಿರುವುದರಿಂದ ಅವುಗಳನ್ನು ಎರವಲುದಾರರು ಬೇರೆಯವರಿಗೆ ಪರಭಾರೆ ಮಾಡತಕ್ಕದ್ದಲ್ಲ.
 • ಕೇವಲ ಗ್ರಂಥಾಲಯದ ಸದಸ್ಯರು ಮಾತ್ರ ಪುಸ್ತಕವನ್ನು ಎರವಲು ಪಡೆಯುವುದರ ಸಲುವಾಗಿ ಪುಸ್ತಕಗಳ ವಿಭಾಗಕ್ಕೆ ಪ್ರವೇಶ ಪಡೆಯಲು ಹಕ್ಕುಳ್ಳವರಾಗಿರುತ್ತಾರೆ. ಆದಾಗ್ಯೂ ಸದಸ್ಯರಿಂದ ಅಧಿಕಾರ ಪತ್ರ ಹೊಂದಿದ ಪ್ರತಿನಿಧಿಗಳು ಮುಖ್ಯ  ಗ್ರಂಥಾಧಿಕಾರಿಯವರ/ ಉಪ ಗ್ರಂಥಾಧಿಕಾರಿಯವರ ಅನುಮತಿಯ ಮೇರೆಗೆ ಎರವಲು ಚೀಟಿಯನ್ನು ಒಪ್ಪಿಸಿ ಗ್ರಂಥವನ್ನು ಎರವಲು ಪಡೆಯಬಹುದಾಗಿದೆ.
 • ಸದಸ್ಯರ ಎರವಲು ಚೀಟಿಗಳ ಮೇಲೆ ನೀಡಿದ ಪುಸ್ತಕಗಳಿಗೆ ಆಯಾ ಸದಸ್ಯರೇ ಜವಾಬ್ದಾರರಾಗಿರುತ್ತಾರೆ.
 • ಎರವಲು ಪಡೆದ ಪುಸ್ತಕವು ಸುಸ್ಥಿತಿಯಲ್ಲಿದೆಯೇ ಎಂಬುದನ್ನು ಸದಸ್ಯರು ಪುಸ್ತಕ ವಿತರಣಾ ವಿಭಾಗವನ್ನು ಬಿಡುವ ಮುನ್ನ ಮನದಟ್ಟು ಮಾಡಿಕೊಳ್ಳತಕ್ಕದ್ದು. ಒಂದುವೇಳೆ ಸುಸ್ಥಿತಿಯಲ್ಲಿರದಿದ್ದಲ್ಲಿ ಅದನ್ನು ಕೂಡಲೇ ಮುಖ್ಯ ಗ್ರಂಥಾಧಿಕಾರಿಯವರ ಗಮನಕ್ಕಾಗಲೀ ಅಥವಾ ಅವರಿಂದ ನಿಯೋಜಿಸಲ್ಪಟ್ಟ ಅಧಿಕಾರಿ/ ಸಿಬ್ಬಂದಿಯವರ ಗಮನಕ್ಕಾಗಲೀ ತರತಕ್ಕದ್ದು.  ಹಾಗೆಯೇ ಎರವಲು ಪಡೆದ ಪುಸ್ತಕವನ್ನು ದುಃಸ್ಥಿತಿಯಲ್ಲಿ ಹಿಂದಿರುಗಿಸಿದ್ದಲ್ಲಿ, ಪುಸ್ತಕದ ಬೆಲೆಯನ್ನು ಅವರು ಭರಿಸಬೇಕಾಗುತ್ತದೆ.  ಅಥವಾ ಅವರು ಸುಸ್ಥಿತಿಯಲ್ಲಿರುವ ಪ್ರತಿಯನ್ನೇ ಹಿಂದಿರುಗಿಸತಕ್ಕದ್ದು.  ಪುಸ್ತಕವನ್ನು ಹಿಂದಿರುಗಿಸಿದ ನಂತರ ಪುಟ ಹರಿದಿರುವುದನ್ನು/ ವಿಕೃತಗೊಳಿಸಿರುವುದನ್ನು ಗ್ರಂಥಾಲಯ ಸಿಬ್ಬಂದಿ ಗಮನಿಸಿದಾಗ, ಆ ಪುಸ್ತಕವನ್ನು ಪಡೆದವರಲ್ಲಿ ಕೊನೆಯ ಎರವಲುದಾರರನ್ನೇ ಜವಾಬ್ದಾರರೆಂದು ಪರಿಗಣಿಸಲಾಗುವುದು.
 • ಎರವಲು ನೀಡಿದ ಪುಸ್ತಕಗಳನ್ನು ಯಾವುದೇ ಸಂದರ್ಭದಲ್ಲಿಯಾದರೂ ಹಿಂದಿರುಗಿಸುವಂತೆ ಸದಸ್ಯರಿಗೆ ಸೂಚಿಸಲು ಮುಖ್ಯ ಗ್ರಂಥಾಧಿಕಾರಿಯವರು / ಉಪ ಗ್ರಂಥಾಧಿಕಾರಿಯವರು ಅಧಿಕಾರ ಹೊಂದಿದವರಾಗಿರುತ್ತಾರೆ.
 • ಪರಾಮರ್ಶೆಗಾಗಿ ಎಂದು ಗುರುತಿಸಲಾದ ಗ್ರಂಥ/ಪುಸ್ತಕಗಳನ್ನು ಹೊರತುಪಡಿಸಿ, ಉಳಿದ ಪುಸ್ತಕಗಳಿಗಾಗಿ ಸದಸ್ಯರುಗಳಿಗೆ ಕಾಯ್ದಿರಿಸುವ ಸೌಲಭ್ಯವನ್ನು ಒದಗಿಸಲಾಗಿದೆ.
 • ಎರವಲು ಪಡೆದ ಪುಸ್ತಕವನ್ನು ಸದಸ್ಯರು ನಿಗದಿತ ದಿನಾಂಕದೊಳಗೆ ಹಿಂದಿರುಗಿಸದೇ ಇದ್ದಲ್ಲಿ, ಗಡುವು ಮೀರಿದ ದಿನದಿಂದ ಪ್ರತಿದಿನಕ್ಕೆ ಪ್ರತಿ ಪುಸ್ತಕಕ್ಕೆ ರೂ.0.50 ರಂತೆ 15 ದಿನಗಳವರೆಗೂ ಹಾಗೂ 16ನೇ ದಿನದಿಂದ ಪ್ರತಿದಿನಕ್ಕೆ ರೂ.1.00 ರಂತೆ ವಿಳಂಬಿತ ಶುಲ್ಕವನ್ನು ಪಾವತಿ ಮಾಡತಕ್ಕದ್ದು.
 • ವಿಳಂಬಿತ ಶುಲ್ಕದೊಡನೆ ಪುಸ್ತಕವನ್ನು ಹಿಂದಿರುಗಿಸದೇ ಇದ್ದಲ್ಲಿ ವಿಳಂಬಿತ ಶುಲ್ಕವು ಪುಸ್ತಕದ ಮೌಲ್ಯಕ್ಕೆ ಸರಿಸಮನಾದ ಪಕ್ಷದಲ್ಲಿ, ಆ ಮೊತ್ತವನ್ನು ಸಂಬಂಧಪಟ್ಟ ಸದಸ್ಯರ ವೇತನದಿಂದ ಕಟಾಯಿಸಲು ಕ್ರಮ ಕೈಗೊಳ್ಳಲಾಗುವುದು ಅಥವಾ ಠೇವಣಿ ಶುಲ್ಕ ಮೊತ್ತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುವುದು.
 • ಯಾವುದೇ ಸದಸ್ಯರು ಹಲವು ಸಂಪುಟಗಳನ್ನು ಹೊಂದಿರುವ ಪುಸ್ತಕಗಳ ಪೈಕಿ ಯಾವುದಾದರೊಂದು ಸಂಪುಟವನ್ನು ಎರವಲು ಪಡೆದು ಹಿಂದಿರುಗಿಸಲು ವಿಫಲವಾದಲ್ಲಿ ಅಂತಹ ಸದಸ್ಯರು ಎಲ್ಲಾ ಸಂಪುಟಗಳ ಮೊತ್ತವನ್ನು ಗ್ರಂಥಾಲಯಕ್ಕೆ ಪಾವತಿ ಮಾಡತಕ್ಕದ್ದು ಅಥವಾ ಎಲ್ಲಾ ಸಂಪುಟಗಳನ್ನು ಗ್ರಂಥಾಲಯಕ್ಕೆ ಒದಗಿಸತಕ್ಕದ್ದು.
 • ಪುಸ್ತಕವನ್ನು ಕಳೆದಲ್ಲಿ ಅಥವಾ ಹಾಳು ಮಾಡಿದಲ್ಲಿ, ಮುಖ್ಯ ಗ್ರಂಥಾಧಿಕಾರಿಯವರ ವಿವೇಚನೆಗೆ ಒಳಪಟ್ಟಂತೆ ಪುಸ್ತಕದ ಮೌಲ್ಯದ ಐದುಪಟ್ಟು ಗರಿಷ್ಟ ಮೊತ್ತವನ್ನು ವಸೂಲು ಮಾಡಬಹುದಾಗಿದೆ. ಆದರೆ ಕನಿಷ್ಟ ಮೊತ್ತವು ಆ ಪುಸ್ತಕ ಬೆಲೆಯ 25% ರಷ್ಟು ಹೆಚ್ಚು ಇರತಕ್ಕದ್ದು.
 • ಯಾವುದೇ ಕಾರಣದಿಂದಲೂ ಗ್ರಂಥಾಲಯದ ಪುಸ್ತಕದಲ್ಲಿ ಪುಟಗಳನ್ನು ಹರಿಯಲು/ ಕೀಳಲು ಅಥವಾ ವಿಕೃತಗೊಳಿಸಲು ಆಸ್ಪದ ಇರುವುದಿಲ್ಲ. ಪುಸ್ತಕವನ್ನು ಹಿಂದಿರುಗಿಸುವಾಗ ಪುಟಗಳು ಹರಿದಿರುವುದು/ ವಿಕೃತಗೊಳಿಸಿರುವುದು ಕಂಡು ಬಂದಲ್ಲಿ ಅಂತಹ ಪುಸ್ತಕವನ್ನು ಹಿಂದಕ್ಕೆ ಸ್ವೀಕರಿಸಲಾಗುವುದಿಲ್ಲ. ಅದಕ್ಕೆ ಬದಲಾಗಿ ಸದಸ್ಯರು ಪುಸ್ತಕದ ಹೊಸ ಪ್ರತಿಯನ್ನು ಗ್ರಂಥಾಲಯಕ್ಕೆ ನೀಡಬೇಕಾಗುತ್ತದೆ.
 • ನಿಯತಕಾಲಿಕೆ : ಸಚಿವಾಲಯ ಗ್ರಂಥಾಲಯದ ಪ್ರತಿಯೊಬ್ಬ ಸದಸ್ಯರಿಗೂ ಒಂದು ನಿಯತಕಾಲಿಕೆ (ಹಳದಿ ಬಣ್ಣದ) ಎರವಲು ಚೀಟಿಯನ್ನು ಒದಗಿಸಲಾಗಿರುತ್ತದೆ. ಗ್ರಂಥಾಲಯಕ್ಕೆ ನಿಯಮಿತವಾಗಿ ಸರಬರಾಜಾಗುವ ನಿಯತಕಾಲಿಕೆಗಳಲ್ಲಿ ಹಳೆಯ/ ಹಿಂದಿನ ಸಂಚಿಕೆಗಳನ್ನು ಎರವಲು ಪಡೆಯಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಈ ರೀತಿ ಎರವಲು ಪಡೆದ ನಿಯತಕಾಲಿಕೆಗಳ ಮೇಲೆ ನಮೂದಿಸಲ್ಪಡುವ ನಿಗದಿತ ಗಡುವು ದಿನಾಂಕದೊಳಗಾಗಿ ಅಥವಾ ಒಂದು ವಾರದ ಒಳಗಾಗಿ ಗ್ರಂಥಾಲಯಕ್ಕೆ ಹಿಂದಿರುಗಿಸತಕ್ಕದ್ದು.

 

ಗ್ರಂಥಾಲಯದ ಸದಸ್ಯರ ಎರವಲು ಚೀಟಿಗಳು ಕಳೆದು ಹೋದಲ್ಲಿ ಅನುಸರಿಸಬೇಕಾದ ಕ್ರಮ:

ಗ್ರಂಥಾಲಯದಿಂದ ಎರವಲು ಚೀಟಿಗಳನ್ನು ಪಡೆದುಕೊಂಡ ಸದಸ್ಯರು ಅವುಗಳನ್ನು ಕಳೆದುಕೊಂಡಲ್ಲಿ, ಕೂಡಲೇ ಅದನ್ನು ಲಿಖಿತ ರೂಪದಲ್ಲಿ ಮುಖ್ಯ ಗ್ರಂಥಾಧಿಕಾರಿಯವರ ಗಮನಕ್ಕೆ ತರತಕ್ಕದ್ದು.  ಈ ಬಗ್ಗೆ ನಿಗದಿಗೊಳಿಸಲಾದ ಘೋಷಣಾ ಪತ್ರವನ್ನು ಸಲ್ಲಿಸತಕ್ಕದ್ದು.  ನಕಲು ಎರವಲು ಚೀಟಿ ಪಡೆಯುವ ಸದಸ್ಯರು ಪ್ರತಿ ಚೀಟಿಗೆ ಮೊದಲ ಸಲ ತಲಾ ರೂ.50/- (ಐವತ್ತು ರೂಪಾಯಿಗಳು ಮಾತ್ರ)  ಎರಡನೇ ಸಲಕ್ಕೆ ತಲಾ ರೂ.100/- (ಒಂದು ನೂರು ರೂಪಾಯಿಗಳು ಮಾತ್ರ) ಶುಲ್ಕವನ್ನು ಗ್ರಂಥಾಲಯಕ್ಕೆ ಪಾವತಿ ಮಾಡತಕ್ಕದ್ದು.    ಹಾಗೂ ಇಂತಹ ಸದಸ್ಯರಿಗೆ ನಕಲು ಎರವಲು ಚೀಟಿ ನೀಡುವ ಮುನ್ನ ಗ್ರಂಥಾಲಯ ಸಮಿತಿಯ ಒಪ್ಪಿಗೆ ಅವಶ್ಯವಾಗಿರುತ್ತದೆ.  ನಕಲು ಎರವಲು ಚೀಟಿ ನೀಡಿದ ನಂತರ ಯಾವುದೇ ಕಾರಣದಿಂದ ಮೂಲ ಎರವಲು ಚೀಟಿ ಮತ್ತು ನಕಲು ಎರವಲು ಚೀಟಿ ಎರಡರ ಮೇಲೆಯೂ ಗ್ರಂಥ ವಿತರಣೆಯಾದಲ್ಲಿ, ಅದಕ್ಕೆ ಗ್ರಂಥಾಲಯವಿ ಜವಾಬ್ದಾರಿಯಾಗಿರುವುದಿಲ್ಲ.  ಬದಲಿಗೆ, ಆಯಾ ಸದಸ್ಯರನ್ನೇ ‍ಜವಾಬ್ದಾರರನ್ನಾಗಿ ಮಾಡಲಾಗುವುದು.  ಕಳೆದುಹೋದ ಎರವಲು ಚೀಟಿಯನ್ನು ಹುಡುಕುವುದಾಗಲೀ ಅಥವಾ ಅದು ದುರುಪಯೋಗವಾಗದಂತೆ ಮಾಡುವ (ನೋಡಿಕೊಳ್ಳುವ) ಜವಾಬ್ದಾರಿ ಗ್ರಂಥಾಲಯದ್ದಾಗಿರುವುದಿಲ್ಲ.

****

ಇತ್ತೀಚಿನ ನವೀಕರಣ​ : 22-02-2022 01:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಚಿವಾಲಯ ಗ್ರಂಥಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080