ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಸಚಿವಾಲಯ ಗ್ರಂಥಾಲಯವು ನಮ್ಮ ದೇಶದಲ್ಲಿರುವ  ಪ್ರತಿಷ್ಠಿತ, ಗಣಕೀಕೃತಗೊಂಡ ಹಾಗೂ ಸುಸಜ್ಜಿತಗೊಂಡ ಗ್ರಂಥಾಲಯಗಳಲ್ಲಿ ಒಂದಾಗಿದೆ.  ಮುಖ್ಯ ಗ್ರಂಥಾಲಯವು  ಕೊಠಡಿ ಸಂಖ್ಯೆ: ೧೧, ನೆಲಮಹಡಿ , ವಿಧಾನಸೌಧದಲ್ಲಿ ಇದ್ದು, ಇದರ ಶಾಖಾ ಗ್ರಂಥಾಲಯವು ಕೊಠಡಿ ಸಂಖ್ಯೆ ೨೧, ನೆಲಮಹಡಿ, ವಿಕಾಸಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಸಚಿವಾಲಯ ಗ್ರಂಥಾಲಯವು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಭಾಗವಾಗಿದೆ ಸರ್ಕಾರದ ಕಾರ್ಯದರ್ಶಿ, ಸಿಆಸುಇ ರವರ ನಿಯಂತ್ರಣದಲ್ಲಿರುತ್ತದೆ.  ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು  ಈ ಗ್ರಂಥಾಲಯದ ಸದಸ್ಯರಾಗಬಹುದಾಗಿದೆ. 

ಪ್ರಸ್ತುತ ಸಚಿವಾಲಯ ಗ್ರಂಥಾಲಯದಲ್ಲಿ,  ಸದಸ್ಯರ ಉಪಯೋಗಕ್ಕಾಗಿ   ಅನೇಕ ವಿಷಯಗಳಿಗೆ ಸಂಬಂಧಿಸಿದ ಸುಮಾರು ೧,೩೩,೦೦೦   ಪುಸ್ತಕಗಳನ್ನು ಸಂಗ್ರಹಿಸಲಾಗಿದೆ.  ಪುಸ್ತಕಗಳಷ್ಟೇ ಅಲ್ಲದೇ  ಗ್ರಂಥಾಲಯದಲ್ಲಿ, ವರದಿಗಳು,  ಗೆಜೆಟೀಯರ್‌ಗಳು, ವಿಶ್ವಕೋಶಗಳು ಇತ್ಯಾದಿಗಳನ್ನು ಸಂಗ್ರಹಿಸಲಾಗಿದೆ.  ಕನ್ನಡ  ಹಾಗೂ ಆಂಗ್ಲ  ಕಾದಂಬರಿಗಳು, ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ತಾಂತ್ರಿಕ, ವೈದ್ಯಕೀಯ, ಧರ್ಮ ಗ್ರಂಥಗಳು  ಹಾಗೂ ಅನೇಕ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳೂ ಸಹ ಈ ಗ್ರಂಥಾಲಯದಲ್ಲಿದೆ.

ಈ ಗ್ರಂಥಾಲಯವು ಪುಸ್ತಕಗಳ ಹೊರತಾಗಿ ಕನ್ನಡದ ಹಾಗೂ ಆಂಗ್ಲ ಭಾಷೆಯ ಹಲವು ನಿಯತಕಾಲಿಕೆ ಹಾಗೂ ದಿನಪತ್ರಿಕೆಗಳನ್ನು ಚಂದಾ ಮಾಡಿಕೊಳ್ಳುತ್ತಿದೆ.  ಸಚಿವಾಲಯ ಗ್ರಂಥಾಲಯದಲ್ಲಿ ಪ್ರತ್ಯೇಕವಾದ ವಾಚನಾಲಯವಿದ್ದು, ಸದಸ್ಯರು ದಿನಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು  ಪರಾಮರ್ಶಿಸಲು ಅನುಕೂಲವಾಗಿದೆ. 

ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗಾಗಿಯೇ ವಿಕಾಸಸೌಧದಲ್ಲಿ ಸಚಿವಾಲಯ ಗ್ರಂಥಾಲಯದ ಶಾಖೆಯನ್ನು ತೆರೆಯಲಾಗಿದೆ.

ಈ ಗ್ರಂಥಾಲಯವು ಸುಮಾರು ೫೦೦೦ ಸದಸ್ಯರನ್ನು ಹೊಂದಿದ್ದು, ಗಣಕೀಕೃತವಾಗಿದೆ.  ಸಚಿವಾಲಯ ಗ್ರಂಥಾಲಯದಲ್ಲಿ ಇ-ಗ್ರಂಥಾಲಯ ತಂತ್ರಾಂಶವನ್ನು ಬಳಸಲಾಗುತ್ತಿದೆ.    ಗ್ರಂಥಾಲಯದ ಸದಸ್ಯರು   ಪುಸ್ತಕಗಳನ್ನು ಹಾಗೂ ನಿಯತಕಾಲಿಕೆಗಳನ್ನು  ಸಚಿವಾಲಯ ಗ್ರಂಥಾಲಯದಿಂದ ಎರವಲು ಪಡೆಯಬಹುದಾಗಿದೆ.  ಎರವಲು ಸಮಯವು ೧೫ ದಿನಗಳಾಗಿರುತ್ತದೆ ಅಲ್ಲದೇ ಎರವಲು ಪಡೆದ ಪುಸ್ತಕಗಳನ್ನು ಗರಿಷ್ಠ ೪೫ ದಿನಗಳವರೆಗೆ ನವೀಕರಿಸಲು ಅವಕಾಶವಿರುತ್ತದೆ.

ಮುಖ್ಯ ಗ್ರಂಥಾಧಿಕಾರಿಗಳು ಗ್ರಂಥಾಲಯದ ದೈನಂದಿನ ಚಟುವಟಿಕೆಳನ್ನು ನಿಯಂತ್ರಿಸುತ್ತಾರೆ.   ಇವರಿಗೆ ಸಹಾಯಕರಾಗಿ ನುರಿತ ಗ್ರಂಥಾಲಯದ ಸಿಬ್ಬಂದಿಗಳ ತಂಡ ಹಾಗೂ ಅಪ್ರೆಂಟಿಸ್‌ ಟ್ರೈನಿಗಳು ಇರುತ್ತಾರೆ.  ಗ್ರಂಥಾಲಯದ  ನಿರ್ವಹಣೆಯ ಹಾಗೂ ಅಭಿವೃದ್ಧಿಯ ಹೊಣೆಗಾರಿಕೆ ಇವರದ್ದಾಗಿರುತ್ತದೆ.  ಗ್ರಂಥಾಲಯದ ದೈನಂದಿನ ಚಟುವಟಿಕೆಗಳಿಗೆ  ನುರಿತ ಸಿಬ್ಬಂದಿಗಳು ಜವಾಬ್ದಾರರಾಗಿರುತ್ತಾರೆ.

ಸಚಿವಾಲಯ ಗ್ರಂಥಾಲಯವು ಇಂಡಿಯನ್‌ ಲೈಬ್ರರಿ ಅಸೋಸಿಯೇಷನ್‌ (ILA) ಹಾಗೂ ಇಂಡಿಯನ್‌ ಅಸೋಸಿಯೇಷನ್‌ ಆಫ್‌ ಸ್ಪೆಷಲ್‌ ಲೈಬ್ರರೀಸ್‌ ಅಂಡ್‌ ಇನ್ಫರ್ಮೇಷನ್‌ ಸೆಂಟರ್‌ (IASLIC) ನ ಸಾಂಸ್ಥಿಕ ಸದಸ್ಯತ್ವನ್ನು ಹೊಂದಿರುತ್ತದೆ.

 

ಗ್ರಂಥಾಲಯದ ಸಂಕ್ಷಿಪ್ತ ವಿವರ

೧)  ಸಂಸ್ಥೆಯ ಹೆಸರು                      :  ಕರ್ನಾಟಕ ಸರ್ಕಾರದ  ಸಚಿವಾಲಯ ಗ್ರಂಥಾಲಯ

೨)  ಸ್ಥಾಪನೆ                                 :  1918

೩)  ವಿಳಾಸ                                 :  ಸಿಆಸುಇ (ಗ್ರಂಥಾಲಯ), ಕೊಠಡಿ ಸಂಖ್ಯೆ: 11,

                                                   ನೆಲಮಹಡಿ, ವಿಧಾನಸೌಧ, ಬೆಂಗಳೂರು.

 

೪)  ಶಾಖೆ                                    :  ಸಿಆಸುಇ (ಗ್ರಂಥಾಲಯ), ಕೊಠಡಿ ಸಂಖ್ಯೆ: 21,

                                                    ನೆಲಮಹಡಿ, ವಿಕಾಸಸೌಧ, ಬೆಂಗಳೂರು.

 

ಗ್ರಂಥಾಲಯದ ಸದಸ್ಯರಿಗೆ  ಇರುವ ಸೌಲಭ್ಯಗಳು :

* ಸಚಿವಾಲಯ ಗ್ರಂಥಾಲಯ ಸಮಿತಿಯ ಶಿಫಾರಸ್ಸಿನ  ಮೇರೆಗೆ  ಈ ಕೆಳಕಂಡ ಸೇವೆಗಳನ್ನು/ ಸೌಲಭ್ಯಗಳನ್ನು ಗ್ರಂಥಾಲಯದ ಸದಸ್ಯರಿಗೆ ಒದಗಿಸಲಾಗುತ್ತಿದೆ.

  ೧. ಬಳಕೆದಾರರ  ದೃಷ್ಟಿಕೋನ ಕಾರ್ಯಕ್ರಮ ( ಗ್ರಂಥಾಲಯದ ಬಗ್ಗೆ ಅರಿವಿನ ಶಿಕ್ಷಣ).

  ೨.  ಗ್ರಂಥಾಲಯ  ಸಂಪನ್ಮೂಲಗಳ  ಬಳಕೆಗೆ ಮುಕ್ತ ಅವಕಾಶ.

* ಸಚಿವಾಲಯ ಗ್ರಂಥಾಲಯಕ್ಕೆ ಹೊಸದಾಗಿ ಬಂದ ಪುಸ್ತಕಗಳನ್ನು ಹಾಗೂ ನಿಯತಕಾಲಿಕೆಗಳನ್ನು  ತಿಂಗಳಿಗೆ ಎರಡು ಬಾರಿ, ಅದಕ್ಕಾಗಿ ಮೀಸಲಾಗಿರುವ ಪುಸ್ತಕಗಳ ಕಪಾಟಿನಲ್ಲಿ  ಸದಸ್ಯರಿಗಾಗಿ ಪ್ರದರ್ಶಿಸುವುದು.   ವಾರ್ಷಿಕವಾಗಿ ಅಂದಾಜು ೧೫೦೦  ಹೊಸ  ಪುಸ್ತಕಗಳನ್ನು ಗ್ರಂಥಾಲಯಕ್ಕೆ ಸೇರ್ಪಡೆ ಮಾಡಲಾಗುತ್ತದೆ.  ದಿನಾಂಕ: ೦೧-೧೧-೨೦೨೦ ರನ್ವಯ ಸಚಿವಾಲಯ ಗ್ರಂಥಾಲಯದಲ್ಲಿ ಶೇಖರಿಸಲಾದ ಒಟ್ಟು ಪುಸ್ತಕಗಳ ಸಂಖ್ಯೆ: ೧,೩೩,೦೦೦  ಇರುತ್ತದೆ.

* ಗ್ರಂಥಾಲಯದ ಸದಸ್ಯರಿಂದ  ಪ್ರತಿಕ್ರಿಯೆಗಳನ್ನು ಹಾಗೂ ಸಲಹೆಗಳನ್ನು ಸಂಗ್ರಹಿಸಲಾಗುತ್ತದೆ.  ಇದಕ್ಕೆ ಸಂಬಂಧಿಸಿದಂತೆ ಸದಸ್ಯರ ಅಭಿಪ್ರಾಯ/ಪ್ರತಿಕ್ರಿಯೆಗಳನ್ನು ಪಡೆಯಲಾಗುತ್ತದೆ.  ಗ್ರಂಥಾಲಯ ಸಮಿತಿಯು ಸದರಿ ಅಭಿಪ್ರಾಯಗಳ ಮೇಲೆ ಕೂಲಕಂಕಷವಾಗಿ  ಸಭೆಯಲ್ಲಿ ಸಮಾಲೋಚಿಸಿ ಇದರ ಬಗ್ಗೆ ಸೂಕ್ತ ಸೇವೆಯನ್ನು ಒದಗಿಸುವಂತೆ ನಿರ್ಣಯ ಕೈಗೊಳ್ಳುತ್ತದೆ. 

* ಸದಸ್ಯರ ಪರಾಮರ್ಶೆಗಾಗಿ  ವಿಶ್ವಕೋಶ, ಶಬ್ದಕೋಶ, ಪ್ರಮುಖ ವ್ಯಕ್ತಿಗಳ ಜೀವನ ಚರಿತ್ರೆ, ಇತ್ಯಾದಿ  ಅನೇಕ  ಪುಸ್ತಕಗಳನ್ನು  ರೆಫರೆನ್ಸ್‌ ವಿಭಾಗದಲ್ಲಿ  ಸಂಗ್ರಹಿಸಿ ಇಡಲಾಗಿದ್ದು,  ಇವುಗಳನ್ನು ಸದಸ್ಯರು ಗ್ರಂಥಾಲಯದಲ್ಲಿಯೇ ಕುಳಿತು ಪರಾಮರ್ಶಿಸಲು  ಸೂಕ್ತ ಅವಕಾಶ ಕಲ್ಪಿಸಲಾಗಿದೆ.

* ಗ್ರಂಥಾಲಯದಲ್ಲಿ ನೆರಳಚ್ಚು ಸೌಲಭ್ಯವನ್ನು ಒದಗಿಸಲಾಗಿದ್ದು, ಸದಸ್ಯರು ಅವಶ್ಯಕತೆಯಿದ್ದಲ್ಲಿ ಅದರ ಸೌಲಭ್ಯವನ್ನು ಸಹ ಪಡೆಯಬಹುದಾಗಿದೆ.

* ಭಾಷಾನುವಾದ : ಗ್ರಂಥಾಲಯದ  ತಾಂತ್ರಿಕ ಸಿಬ್ಬಂದಿಗಳು ಭಾಷಾಂತರ ಮಾಡುವ ಸೇವೆಯನ್ನು ಸಹ ಸದಸ್ಯರಿಗೆ  ಕೆಲವು ಸಂದರ್ಭಗಳಲ್ಲಿ ಒದಗಿಸುತ್ತಾರೆ.

* ಸಚಿವಾಲಯ ಗ್ರಂಥಾಲಯದಲ್ಲಿ ಹಾಗೂ ಅದರ ಶಾಖೆಯಲ್ಲಿ  ಸೂಚನಾ ಫಲಕವನ್ನು ಅಳವಡಿಸಲಾಗಿದ್ದು, ಅದರಲ್ಲಿ ಮುಖ್ಯವಾದ ಸುತ್ತೋಲೆ, ಪ್ರಮುಖ ಸುದ್ದಿಗಳು ಹಾಗೂ ಸದಸ್ಯರಿಗಾಗಿ ನೀಡುವ ಸೂಚನೆ ಇತ್ಯಾದಿಗಳನ್ನು ಪ್ರದರ್ಶಿಸಲಾಗುತ್ತದೆ.

* ಗ್ರಂಥಾಲಯದಲ್ಲಿ ಪುಸ್ತಕಗಳ ವಿತರಣೆ ಹಾಗೂ ಹಿಂಪಡೆಯುವಿಕೆಯ ಸೇವೆಯನ್ನು  ಶೀಘ್ರವಾಗಿ ಒದಗಿಸಲಾಗುತ್ತಿದ್ದು, ಸದಸ್ಯರ ಅಮೂಲ್ಯ ಸಮಯವನ್ನು ಉಳಿಸಲಾಗುತ್ತಿದೆ. 

* ಗ್ರಂಥಾಲಯದಲ್ಲಿ  ಗ್ರಂಥಗಳನ್ನು ಎರವಲು ನೀಡುವ ಸಲುವಾಗಿಯೇ ಅನೇಕ ಪುಸ್ತಕಗಳಿವೆ, ಇದಲ್ಲದೆ ಪರಾಮರ್ಶೆಗಾಗಿ ಅತ್ಯಮೂಲ್ಯ ಆಕರ ಗ್ರಂಥಗಳ ಸಂಗ್ರಹವಿದೆ.  ದಿನಪತ್ರಿಕೆ, ನಿಯತಕಾಲಿಕೆ ಇತ್ಯಾದಿಗಳು ಸಹ ಗ್ರಂಥಾಲಯದಲ್ಲಿ ಲಭ್ಯವಿದೆ.   ಗ್ರಂಥಾಲಯದಲ್ಲಿ ಸುಮಾರು ೧,೩೩,೦೦೦ ಪುಸ್ತಕಗಳಿದ್ದು, ೫೯   ನಿಯತಕಾಲಿಕೆಗಳನ್ನು ಸಹ ಚಂದಾ ಮಾಡಿಕೊಳ್ಳಲಾಗಿದೆ.

* ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆಂದೇ ಪ್ರತ್ಯೇಕ ಪುಸ್ತಕಗಳನ್ನು ಹಾಗೂ ನಿಯತಕಾಲಿಕೆಗಳ ಸೌಲಭ್ಯವನ್ನು ಸದಸ್ಯರಿಗೆ ಒದಗಿಸಲಾಗಿದೆ.  ಇದಲ್ಲದೆ,  ಕಂಪೆಂಡಿಯಂಗಳು, ಸಿವಿಲ್‌ ಲಿಸ್ಟ್‌, ವರದಿಗಳು, ಹಳೆಯ ಪುಸ್ತಕಗಳು, ವಾರ್ಷಿಕ ವರದಿಗಳು ಇತ್ಯಾದಿಗಳನ್ನು ಸಂಗ್ರಹಿಸಲಾಗಿದ್ದು, ಸದಸ್ಯರು ಇದರ ಉಪಯೋಗ ಪಡೆದು ತಮ್ಮ ಕರ್ತವ್ಯಗಳನ್ನು ಮತ್ತಷ್ಟು ಸಮರ್ಪಕವಾಗಿ ನಿರ್ವಹಿಸಲು ಅನುಕೂಲ ಕಲ್ಪಿಸಲಾಗಿದೆ.    

* ಗ್ರಂಥಾಲಯವು ಎಲ್ಲಾ ಸರ್ಕಾರಿ ಕೆಲಸದ ದಿನಗಳಂದು ಬೆಳಗ್ಗೆ ೧೦.೦೦ ಗಂಟೆಯಿಂದ ಸಂಜೆ ೫.೩೦ ರವರೆಗೆ ಕಾರ್ಯ ನಿರ್ವಹಿಸುತ್ತದೆ.

*‌ ಸಚಿವಾಲಯದ ಮುಖ್ಯ ಗ್ರಂಥಾಲಯದಲ್ಲಿ ಹಾಗೂ ಅದರ ಶಾಖಾ ಗ್ರಂಥಾಲಯದಲ್ಲಿ ಪ್ರತ್ಯೇಕವಾದ ವಾಚನಾಲಯ ವ್ಯವಸ್ಥೆ ಇರುತ್ತದೆ.

* ಹಿರಿಯ ಐ.ಎ.ಎಸ್‌ ಅಧಿಕಾರಿಗಳಿಗಾಗಿಯೇ ಗ್ರಂಥಾಲಯದಲ್ಲಿ ಪ್ರತ್ಯೇಕ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಯಾವುದೇ ಅಡಚಣೆಯಿಲ್ಲದೇ ಪುಸ್ತಕಗಳನ್ನು ಪರಾಮರ್ಶಿಸಲು ಅನುಕೂಲ ಕಲ್ಪಿಸಲಾಗಿದೆ.

* ಸಚಿವಾಲಯ ಗ್ರಂಥಾಲಯದ ಸದಸ್ಯತ್ವವನ್ನು, ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಸಚಿವಾಲಯದ ನೌಕರರು ಹಾಗೂ ಅಧಿಕಾರಿಗಳಿಗೆ ಉಚಿತವಾಗಿ ನೀಡಲಾಗುತ್ತಿದೆ.  ಅಂತಹ ಸದಸ್ಯರು ಗ್ರಂಥಾಲಯದಿಂದ ೪ ಪುಸ್ತಕಗಳನ್ನು ಹಾಗೂ ೨ ನಿಯತಕಾಲಿಕೆಗಳನ್ನು ಏಕ ಕಾಲಕ್ಕೆ ಎರವಲು ಪಡೆಯಬಹುದಾಗಿದೆ. 

* ಸಚಿವಾಲಯದ ಸೇವೆಯಿಂದ ನಿವೃತ್ತಿ ಹೊಂದಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಿವೃತ್ತಿಯ ನಂತರವೂ ಗ್ರಂಥಾಲಯದ ಸದಸ್ಯತ್ವವನ್ನು ರೂ.೪೦೦/- (ರೂಪಾಯಿಗಳು ನಾನ್ನೂರು ಮಾತ್ರ)  ಗಳ ಹಿಂದಿರುಗಿಸಲಾಗುವ ಠೇವಣಿ ಮೊತ್ತವನ್ನು ಹಾಗೂ ರೂ.೨೦/- (ರೂಪಾಯಿಗಳು ಇಪ್ಪತ್ತು ಮಾತ್ರ) ಹಿಂದಿರುಗಿಸದೇ ಇರುವ ಸದಸ್ಯತ್ವ ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಿ  ಪಡೆಯಬಹುದಾಗಿದೆ.  ಅಂತಹ ಸದಸ್ಯರು ಏಕ ಕಾಲಕ್ಕೆ ೨ ಗ್ರಂಥಗಳನ್ನು ಹಾಗೂ ೨ ನಿಯತಕಾಲಿಕೆಗಳನ್ನು ಪಡೆಯಲು ಅವಕಾಶವಿರುತ್ತದೆ. 

* ಪುಸ್ತಕಗಳನ್ನು ಸಂಗ್ರಹಿಸಿ ಇಡಲಾದ ಎಲ್ಲಾ  ಕಪಾಟುಗಳ ಮೇಲೆ   ಸಂಬಂಧಪಟ್ಟ ವಿಷಯಗಳನ್ನು ಸೂಚಿಸುವ ಫಲಕವನ್ನು ಹಾಕಲಾಗಿದೆ.  ಇದರಿಂದಾಗಿ ಸದಸ್ಯರಿಗೆ ಅಗತ್ಯವಿರುವ ವಿಷಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಪಡೆಯಲು ಅನುಕೂಲ ಕಲ್ಪಸಲಾಗಿದೆ. 

* ಸದಸ್ಯರಿಗೆ ಅಗತ್ಯವಿರುವ ಮಾಹಿತಿಯನ್ನು ನೆರಳಚ್ಚು ಸಹ  ಮಾಡಿಕೊಡುವ ಅನುಕೂಲ ಕಲ್ಪಿಸಲಾಗಿದೆ.

* ಸಚಿವಾಲಯ ಗ್ರಂಥಾಲಯಕ್ಕೆ ಸರಬರಾಜಾಗುವ ಎಲ್ಲಾ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳ  ಹಿಂದಿನ ೩ ತಿಂಗಳ ಪ್ರತಿಗಳನ್ನು ಪರಾಮರ್ಶೆಗಾಗಿ ಸಂಗ್ರಹಿಸಲಾಗುತ್ತಿದೆ.

* ಸದಸ್ಯರು ಹಳೆಯ ದಿನಪತ್ರಿಕೆ ಅಥವಾ ನಿಯತಕಾಲಿಕೆಗಳನ್ನು ಪಡೆಯಲು ಇಚ್ಚಿಸಿದಲ್ಲಿ ಅವುಗಳ ಮುಖಬೆಲೆಯ ಶೇಕಡ ೨೫% ನ್ನು ಸರ್ಕಾರಕ್ಕೆ ಪಾವತಿಸಿ ಪಡೆಯಬಹುದಾಗಿದೆ.

* ಇಲಾಖಾ ಪುಸ್ತಕಗಳನ್ನು ಪ್ರತ್ಯೇಕ ಕಪಾಟುಗಳಲ್ಲಿ ಇಡಲಾಗಿದೆ.

* ಸಚಿವಾಲಯ ಗ್ರಂಥಾಲಯಕ್ಕೆ http://vslib.kar.nic. In  ಪ್ರತ್ಯೇಕ ಜಾಲತಾಣವಿದೆ.   ಈ ಜಾಲತಾಣದಲ್ಲಿ ಸದಸ್ಯರು ತಮಗೆ ಅಗತ್ಯವಿರುವ ಪುಸ್ತಕಗಳನ್ನು ಸ್ವತ: ತಾವೇ  ಹುಡುಕುವ ಅವಕಾಶವ ಕಲ್ಪಸಲಾಗಿದೆ. 

* ಸಚಿವಾಲಯ ಗ್ರಂಥಾಲಯದಲ್ಲಿ ಇ-ಗ್ರಂಥಾಲಯ  ತಂತ್ರಾಂಶವನ್ನು ಬಳಸಲಾಗುತ್ತಿದೆ.

* ಸಿಆಸುಇ ಹಾಗೂ ಆರ್ಥಿಕ ಇಲಾಖೆಗೆ ಸಂಬಂಧಿಸಿದ ಕಂಪೆಂಡಿಯಂಗಳನ್ನು ಪ್ರತ್ಯೇಕ ಕಪಾಟಿನಲ್ಲಿ ಇಡಲಾಗಿದೆ.

* ಗ್ಯೆಜೆಟ್‌, ಗ್ಯೆಜಟೀರ್‌ ಗಳನ್ನು ಸಹ ಪರಾಮರ್ಶೆಗಾಗಿ ಇಡಲಾಗಿದೆ.

* ಸಚಿವಾಲಯ ಗ್ರಂಥಾಲಯದಲ್ಲಿ ಡಿ.ಡಿ.ಸಿ. ಮಾದರಿಯ ಪುಸ್ತಕಗಳ ವರ್ಗೀಕರಣ ವ್ಯವಸ್ಥೆಯನ್ನು ರೂಢಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 23-11-2020 11:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಚಿವಾಲಯ ಗ್ರಂಥಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080