ಅಭಿಪ್ರಾಯ / ಸಲಹೆಗಳು

ಗ್ರಂಥಾಲಯದ ವಿಭಾಗಗಳು

ಸಚಿವಾಲಯ ಗ್ರಂಥಾಲಯದ ವಿವಿಧ ವಿಭಾಗಗಳು

 

1.   ಅರ್ಜನೆ ವಿಭಾಗ

2.   ತಾಂತ್ರಿಕ ವಿಭಾಗ

3.   ಸರ್ಕುಲೇಷನ್‌ ಮತ್ತು ರೆಫರೆನ್ಸ್ ವಿಭಾಗ

4.   ನಿಯತಕಾಲಿಕೆಗಳ ವಿಭಾಗ

5.   ಆಡಳಿತ ವಿಭಾಗ

6.   ಬೈಂಡಿಂಗ್‌ ವಿಭಾಗ

 

1.‌ ಅರ್ಜನೆ ವಿಭಾಗ :

  •  ಪುಸ್ತಕ ಆಯ್ಕೆ ಸಮಿತಿ ಸಭೆ ಕರೆಯುವುದು.
  •  ವಿವಿಧ ನಿಯತಕಾಲಿಕೆ/ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ಪುಸ್ತಕ ವಿಮರ್ಶೆಗಳನ್ನು ಸಂಗ್ರಹಿಸುವುದು.
  •  ಆಯ್ಕೆಯಾದ ಗ್ರಂಥಗಳನ್ನು ಪುಸ್ತಕ ಸರಬರಾಜುದಾರರಿಂದ ತರಿಸಲು ವ್ಯವಸ್ಥೆ ಮಾಡುವುದು.
  •  ಪುಸ್ತಕಗಳು ಬಾರದೇ ಇದ್ದಲ್ಲಿ ನೆನಪೋಲೆ ಕಳುಹಿಸುವುದು.
  •  ಕೊಡುಗೆಯಾಗಿ ಬಂದ ಪುಸ್ತಕಗಳನ್ನು ನೊಂದಣಿ ಮಾಡುವುದು. ಅಗತ್ಯ ಸ್ವೀಕೃತಿ ನೀಡುವುದು.
  •  ಹೊಸ ಗ್ರಂಥಗಳನ್ನು ನೊಂದಾಯಿಸಿಕೊಳ್ಳುವುದು.
  •  ಬಾರ್‌ ಕೋಡ್‌ ಲೇಬಲ್‌ ಗಳನ್ನು ಜನರೇಟ್‌ ಮಾಡುವುದು.
  •  ಗ್ರಂಥ ಖರೀದಿಯ ಬಿಲ್‌ಗೆ ಸಂಬಂಧಪಟ್ಟ ರಿಜಿಸ್ಟರ್‌ ನಿರ್ವಹಣೆ.
  •  ಡಿ.ಸಿ. ಬಿಲ್‌ ತಯಾರಿಸುವುದು.
  •  ಸದಸ್ಯರಿಂದ ಗ್ರಂಥ ಖರೀದಿಗೆ ಬರುವ ಬೇಡಿಕೆಗಳನ್ನು ಪರಿಶೀಲಿಸುವುದು.
  • ಪುಸ್ತಕ ಕಳೆದುಕೊಂಡು ಹಣ ಪಾವತಿ ಮಾಡಿದಂತಹ ಗ್ರಂಥಗಳನ್ನು ನೊಂದಣಿ ರಿಜಿಸ್ಟರ್‌ ನಿಂದ ರದ್ದು ಗೊಳಿಸಿದಲ್ಲಿ ಅಂತಹ ಗ್ರಂಥಗಳನ್ನ ರಿಪ್ಲೇಸ್‌ ಮಾಡಲು ಕ್ರಮ ಕೈಗೊಳ್ಳುವುದು.

 

2. ತಾಂತ್ರಿಕ ವಿಭಾಗ :

  • ಹೊಸ ಗ್ರಂಥಗಳ ವರ್ಗೀಕರಣ ಮಾಡುವುದು.
  • ಬುಕ್‌ ಕಾರ್ಡ್‌ ಗಳನ್ನು ತಯಾರಿಸುವುದು. ಡ್ಯೂ ಡೇಟ್‌ ಸ್ಲಿಪ್‌ ಹಾಕುವುದು.
  • ಗ್ರಂಥಗಳ ಮಾಹಿತಿಯನ್ನು ಕಂಪ್ಯೂಟರ್‌ ನಲ್ಲಿ ಅಳವಡಿಸುವುದು.
  • ಸ್ಪೈನ್‌ ಲೇಬಲ್ಸ್‌ ಹಾಕುವುದು.
  • ಅಗತ್ಯ ರಿಜಿಸ್ಟರ್‌ ಗಳ ನಿರ್ವಹಣೆ.
  • ವಾರ್ಷಿಕ ವರದಿ ತಯಾರಿಕೆ.

 

3. ಸರ್ಕುಲೇಷನ್‌ ಮತ್ತು ರೆಫರೆನ್ಸ್‌ ವಿಭಾಗ :

  • ಸಚಿವಾಲಯದ ಸಿಬ್ಬಂದಿಗೆ ಸಚಿವಾಲಯ ಗ್ರಂಥಾಲಯದ ಹೊಸ ಸದಸ್ಯತ್ವ ನೀಡುವುದು.
  • ಗ್ರಂಥ ವಿತರಣೆ/ಹಿಂಪಡೆಯುವಿಕೆ ಕೌಂಟರ್‌ ಕಾರ್ಯ ನಿರ್ವಹಣೆ.
  • ಗ್ರಂಥ/ನಿಯತಕಾಲಿಕೆ ಕಳೆದುಕೊಂಡವರಿಂದ ಶುಲ್ಕ ವಸೂಲಾತಿ.
  • ಸದರಿ ಶುಲ್ಕವನ್ನು ಖಜಾನೆಗೆ ಪಾವತಿ ಮಾಡಿ ರಸೀದಿ ಪಡೆಯುವುದು.
  • ಇದಕ್ಕೆ ಸಂಬಂಧಿಸಿದಂತೆ ಅಗತ್ಯ ರಿಜಿಸ್ಟರ್‌ ನಿರ್ವಹಣೆ.
  • ಗ್ರಂಥ ನೀಡಿಕೆ/ಹಿಂಪಡೆಯುವಿಕೆಯ ಅಂಕಿ ಅಂಶಗಳನ್ನು ದಾಖಲಿಸುವುದು.
  • ಶೆಲ್ಫ್‌ ರೆಕ್ಟಿಫಿಕೇಷನ್‌ ಮಾಡುವುದು.
  • ಹರಿದುಹೋದ ಗ್ರಂಥಗಳನ್ನು ಬೈಂಡಿಂಗ್‌ ವಿಭಾಗಕ್ಕೆ ಕಳುಹಿಸುವುದು.
  • ರೆಪ್ರೋಗ್ರಫಿಕ್‌ ಸೇವೆ ನೀಡುವುದು.
  • ಹದಿನೈದು ವರ್ಷಗಳಿಂದ ಯಾರೂ ಉಪಯೋಗಿಸದೇ ಇರುವ ಚಾರಿತ್ರಿಕ ಮಹತ್ವ ಇಲ್ಲದ ಗ್ರಂಥಗಳನ್ನು ಗುರುತಿಸಿ ರದ್ದುಗೊಳಿಸುವ ಕ್ರಮ ಕೈಗೊಳ್ಳಲು ಗ್ರಂಥಗಳ  ಪಟ್ಟಿ ಮಾಡುವುದು.
  • ಗ್ರಂಥಗಳನ್ನು ಸಕಾಲದಲ್ಲಿ ಹಿಂದಿರುಗಿಸದೇ ಇರುವ ಸದಸ್ಯರಿಗೆ ನೆನಪೋಲೆ ಕಳುಹಿಸುವುದು.
  • ಸದಸ್ಯತ್ವ (ನಿವೃತ್ತ/ಸಚಿವಾಲಯೇತರ ಸದಸ್ಯರ) ಠೇವಣಿ  ಮರುಪಾವತಿ.
  • ಹೆಚ್ಚುವರಿ ಎರವಲು ಚೀಟಿ ನೀಡುವುದು.
  • ನಕಲು ಎರವಲು ಚೀಟಿ ನೀಡುವುದು.
  • ಕಂಪ್ಯೂಟರ್‌ ನಲ್ಲಿ ಸದಸ್ಯರ ಮಾಹಿತಿಯನ್ನು ದಾಖಲಿಸುವುದು.
  • ಬೇಬಾಕಿ ಪತ್ರ ನೀಡುವುದು.
  • ಗ್ರಂಥಾಲಯಕ್ಕೆ ಸಂಬಂದಿಸಿದ ಅಗತ್ಯ ಮಾಹಿತಿಯನ್ನು ಸೂಚನಾ ಫಲಕಕ್ಕೆ ಹಾಕುವುದು.
  • ಗ್ರಂಥ ಹಿಂದಿರುಗಿಸದೇ ಇರುವ ಸದಸ್ಯರ ವೇತನದಿಂದ ಗ್ರಂಥದ ಶುಲ್ಕ/ವಿಳಂಬ ಶುಲ್ಕ ಕಟಾವು ಮಾಡಲು ಕ್ರಮ ಕೈಗೊಳ್ಳುವುದು.

 

4. ನಿಯತಕಾಲಿಕೆಗಳ ವಿಭಾಗ :

  • ನಿಯತಕಾಲಿಕೆ/ದಿನಪತ್ರಿಕೆಗಳನ್ನು ತರಿಸಲು ಟೆಂಡರ್‌ ಕರೆಯುವುದು.
  • ವಾರ್ಷಿಕ ಚಂದಾ ಪಾವತಿ / ಚಂದಾ ನವೀಕರಣೆ.
  • ಸಂಬಂಧ ಪಟ್ಟ ರಿಜಿಸ್ಟರ್‌ ನಲ್ಲಿ ನಿಯತಕಾಲಿಕೆ/ದಿನಪತ್ರಿಕೆಗಳ ವಿವರ ದಾಖಲಿಸುವುದು.
  • ಮೂರು ತಿಂಗಳಿಗೊಮ್ಮೆ ಸರಬರಾಜುದಾರರಿಗೆ ಬಿಲ್‌ ಪಾವತಿ ಮಾಡುವುದು.
  • ಸರಬರಾಜಾಗದ ನಿಯತಕಾಲಿಕೆ/ದಿನಪತ್ರಿಕೆಗಳ ವಿವರ ಇಡುವುದು.
  • ಸರಬರಾಜಾಗದೇ ಇರುವ ನಿಯತಕಾಲಿಕೆ/ದಿನಪತ್ರಿಕೆಗಳಿಗಾಗಿ ನೆನಪೋಲೆ ಕಳುಹಿಸುವುದು.
  • ಕಾಲ ವಿಳಂಬ ಮನ್ನ ಪ್ರಸ್ತಾಪಗಳನ್ನು ನಿಯಮಾನುಸಾರ ನಿರ್ವಹಿಸುವುದು.
  • ಬೇರೆ ಇಲಾಖೆಗಳಿಂದ ಸಚಿವಾಲಯಕ್ಕೆ ಬರುವ ಅಧಿಕಾರಿಗಳಿಗೆ ನಿಯಮಾನುಸಾರ ದಿನಪತ್ರಿಕೆ/ನಿಯತಕಾಲಿಕೆ ಪಡೆಯಲು ಅನುಮತಿ ನೀಡುವ ಪ್ರಸ್ತಾವ ಪರಿಶೀಲಿಸಿ ಮಂಡಿಸುವುದು.
  • ಹಳೆಯ ದಿನಪತ್ರಿಕೆ/ನಿಯತಕಾಲಿಕೆಗಳನ್ನು ಮೂರು ತಿಂಗಳಿಗೊಮ್ಮೆ ವಿಲೆ ಮಾಡುವುದು.
  • ಹಳೆಯ ದಿನಪತ್ರಿಕೆ/ನಿಯತಕಾಲಿಕೆ ವಿಲೇ ಮಾಡಲು ವಾರ್ಷಿಕ ಟೆಂಡರ್‌ ಕರೆಯುವುದು.
  • ಎಲ್ಲಾ ದಿನಪತ್ರಿಕೆ ಹಾಗೂ ಆಯ್ದ ನಿಯತಕಾಲಿಕೆಯ ತಲಾ ಒಂದು ಪ್ರತಿಯನ್ನು ರೆಫರೆನ್ಸ್‌  ಆಗಿ ಇಡುವುದು.

 

5. ಆಡಳಿತ ವಿಭಾಗ :

  • ಗ್ರಂಥಾಲಯಕ್ಕೆ ಸಂಬಂಧಪಟ್ಟಂತೆ ಸಚಿವಾಲಯದ ಇತರೆ ಇಲಾಖೆಗಳೊಡನೆ ಪತ್ರ ವ್ಯವಹಾರಗಳು.
  • ಅಪ್ರೆಂಟಿಸ್‌ ತರಬೇತಿಗೆ ಸಂಬಂಧಪಟ್ಟ ತರಬೇತಿ ಕೈಪಿಡಿ ಸಿದ್ಧಪಡಿಸುವಿಕೆ.
  • ಅಪ್ರೆಂಟಿಸ್‌ ತರಬೇತಿಗೆ ಸಂಬಂಧಪಟ್ಟಂತೆ ಪ್ರಾಯೋಗಿಕ ತರಬೇತಿ ನೀಡಿಕೆ.
  • ಸರ್ಕಾರಿ ಪಾಲಿಟೆಕ್ನಿಕ್‌ ನಿಂದ ಬರುವ ಪ್ರಿ ಅಪ್ರೆಂಟಿಸ್‌ ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಿಕೆ.
  • ಗ್ರಂಥಾಲಯದ ಒಳಭಾಗದಲ್ಲಿ ಸಮರ್ಪಕ ಸ್ವಚ್ಛತೆ ನಿಗಾ ವಹಿಸುವಿಕೆ.
  • ಗ್ರಂಥಗಳು ಹಾಳಾಗದ ಹಾಗೆ ಕ್ರಿಮಿನಾಶಕ ಸಿಂಪಡಿಸಲು ಕ್ರಮ ವಹಿಸುವಿಕೆ.
  • ಗ್ರಂಥಾಲಯದ ಒಳಭಾಗದಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಕಲ್ಪಿಸುವಿಕೆ.
  • ಜೆರಾಕ್ಸ್‌ ಯಂತ್ರ, ಸ್ಕ್ಯಾನರ್‌, ಕಂಪ್ಯೂಟರ್‌ ಮತ್ತು ಪ್ರಿಂಟರ್‌ ಗಳ ನಿರ್ವಹಣೆ.
  • ವಾರ್ಷಿಕ ದಾಸ್ತಾನು ಪರಿಶೀಲನೆ ಮತ್ತು ವರದಿ ಕಳುಹಿಸುವಿಕೆ.
  • ಹೊಸದಾಗಿ ಬಂದ ಪುಸ್ತಕಗಳನ್ನು ಆಯಾ ರಾಕ್‌ ಮೇಲೆ ಇರಿಸುವಿಕೆ.
  • ಗ್ರಂಥಾಲಯಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಸೂಚನಾ ಫಲಕದಲ್ಲಿ ಹಾಕಿಸುವಿಕೆ.
  • ವಾರ್ಷಿಕ ದಾಸ್ತಾನು ವಿವರಗಳನ್ನು ಸಂಬಂಧಪಟ್ಟ ರಿಜಿಸ್ಟರ್‌ ನಲ್ಲಿ ದಾಖಲಿಸಿಕೊಳ್ಳುವಿಕೆ.
  • ಗ್ರಂಥಾಲಯದ ಅಧಿಕಾರಿಗಳು/ಸಿಬ್ಬಂದಿಗಳ ಸೇವಾ ನಿರ್ವಹಣೆ.
  • ಗ್ರಂಥಾಲಯಕ್ಕೆ ಬೇಕಾಗಿರುವ ಸ್ಟೇಷನರಿಗಳನ್ನು ತರಿಸುವಿಕೆ.
  • ಗ್ರಂಥಾಲಯಕ್ಕೆ ಬೇಕಾಗಿರುವ ಲ್ಯಾಮಿನೇಷನ್‌ ರೋಲ್ಸ್‌ ಮತ್ತು ಬುಕ್‌ ಎಂಡ್ಸ್‌ ತರಿಸುವಿಕೆ.
  • ಗ್ರಂಥಾಲಯಕ್ಕೆ ಸಂಬಂಧಿಸಿದ ಆಡಿಟ್‌ ವರದಿ ಮುಂತಾದವುಗಳಿಗೆ ಉತ್ತರ ನೀಡಿಕೆ.

6.ಬೈಂಡಿಂಗ್‌ ವಿಭಾಗ :

  • ಹೊಸ ಪುಸ್ತಕಗಳಿಗೆ ಬುಕ್‌ ಪಾಕೆಟ್‌ ಗಳನ್ನು ಅಳವಡಿಸುವುದು.
  • ಪುಸ್ತಕಗಳಿಗೆ ಸ್ಪೈನ್‌ ಲೇಬಲ್‌ ಮತ್ತು ಪ್ಲಾಸ್ಟಿಕ್‌ ರಾಪರ್‌ ಗಳನ್ನು ಹಾಕುವುದು.
  • ಹರಿದಿರುವ ಹಾಗೂ ಹಳೆಯ ಪುಸ್ತಕಗಳನ್ನು ಬೈಂಡ್‌ ಮಾಡುವುದು.
  • ಬೈಂಡಿಂಗ್‌ ವಿಭಾಗಕ್ಕೆ ಅಗತ್ಯವಿರುವ ಲೇಖನ ಸಾಮಗ್ರಿಗಳನ್ನು ಸರ್ಕಾರಿ ಮುದ್ರಣಾಲಯದಿಂದ ತರಿಸಲು ಪ್ರಸ್ತಾವನೆಗಳನ್ನು ಸಲ್ಲಿಸುವುದು.

 

 

 

 

 

 

 

 

 

 

 

 

 

 

 

 

 

 

ಇತ್ತೀಚಿನ ನವೀಕರಣ​ : 24-11-2020 03:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಚಿವಾಲಯ ಗ್ರಂಥಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080